NEW UPDATES

* 2021-22 ನೇ ಸಾಲಿಗೆ ನಲಿಕಲಿ ಕಲಿಕಾ ಪದ್ಧತಿಯ ಅನುಷ್ಠಾನದ ಅಡಿಯಲ್ಲಿ 60 ದಿನಗಳ ಸೇತುಬಂಧ ಕಲಿಕಾ ಮಾದರಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವ ಬಗ್ಗೆ

* 2021-22 ನೇ ಸಾಲಿನ ಪರ್ಯಾಯ ಶೈಕ್ಷಣಿಕ ಕ್ರಿಯಾಯೋಜನೆಯ ನಮೂನೆಗಳು

* 2021-22 ನೇ ಸಾಲಿನ ನಲಿಕಲಿ ತರಗತಿಗಳ ವಾರ್ಷಿಕ ಪಠ್ಯ ವಿಭಜನೆ

* 2021-22 ನೇ ಸಾಲಿನ 4ನೇ ತರಗತಿ ಕನ್ನಡ, ಇಂಗ್ಲೀಷ್, ಪರಿಸರ ಅಧ್ಯಯನ ವಾರ್ಷಿಕ ಪಠ್ಯ ವಿಭಜನೆ* 2021-22 ನೇ ಸಾಲಿನ ಶಾಲಾ ಅಭಿವೃದ್ಧಿ ಯೋಜನೆ SDP

* ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 2021-22 ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ನಿರ್ವಹಣೆಗೆ ಮಾರ್ಗಸೂಚಿ ಹಾಗೂ ಪರ್ಯಾಯ ಶೈಕ್ಷಣಿಕ ಯೋಜನೆ


ABOUT US

ಎಲ್ಲಾ ಶಿಕ್ಷಕ‌ ವೃತ್ತಿ ಬಾಂಧವರಿಗೆ‌ ನನ್ನ ನಮಸ್ಕಾರಗಳು...
ಮಹಮದ್‌ ಬಾಷ ಕೆ‌ ಸ.ಶಿ. ಸರ್ಕಾರಿ ಮಾದರಿ‌ ಹಿರಿಯ ಪ್ರಾಥಮಿಕ ಶಾಲೆ ತೋರಣಗಲ್ಲು ತಾ.ಸಂಡೂರು ಜಿ.ಬಳ್ಳಾರಿ ‌ಆದ ನಾನು ಮೂಲತಃ ‌ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು‌ ತಾಲೂಕಿನ‌ ಕರಡಿಹಳ್ಳಿ ಎಂಬ ಪುಟ್ಟ‌ ಗ್ರಾಮ ನನ್ನೂರು.  ರಾಯಚೂರು ಜಿಲ್ಲೆಯಲ್ಲಿ 2008 ರಲ್ಲಿ‌ ವೃತ್ತಿಗೆ ಸೇರಿದ‌ ನಾನು ‌2014 ರಲ್ಲಿ‌ ವರ್ಗಾವಣೆ ಹೊಂದಿ‌ ಪ್ರಸ್ತುತ GMHPS ತೋರಣಗಲ್ಲು ಶಾಲೆಯಲ್ಲಿ ‌ಕರ್ತವ್ಯ ನಿರ್ವಹಿಸುತ್ತಿದ್ದೇನೆ.
ಅತ್ಮೀಯರೆ ನಾನು‌ 2016 ರಲ್ಲಿ ಸಣ್ಣ WhatsApp group ರಚಿಸಿ‌ ಅದರಿಂದ ಸಾಕಷ್ಟು ‌ಜನ ಶಿಕ್ಷಕ ಮಿತ್ರರಿಗೆ ಇಲಾಖೆಯ ಆದೇಶಗಳು ಹಾಗೂ ಉಪಯುಕ್ತ ಶೈಕ್ಷಣಿಕ ಮಾಹಿತಿಯನ್ನು ‌ಹಂಚಿಕೊಳ್ಳಲು ಪ್ರಾರಂಭಿಸಿದೆ.‌ ಶಿಕ್ಷಕರಿಗೆ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಏಕೆ‌ ಒಂದೇ ಬ್ಲಾಗ್ ನಲ್ಲಿ ಸಿಗುವಂತೆ ಮಾಡಬಾರದು? ಎಂದು ಯೋಚಿಸಿದೆ,ಇದೇ ಸಂಧರ್ಭದಲ್ಲಿ "ರೋಗಿ ಬಯಸಿದ್ದು ಹಾಲು ಅನ್ನ, ವೈದ್ಯರು ಹೇಳಿದ್ದು ಹಾಲು ಅನ್ನ"‌ ಎಂಬ ಗಾದೆ ಮಾತಿನಂತೆ, "ಮಾನ್ಯ ಅಪರ ಆಯುಕ್ತರು‌ ಸಾ.ಶಿ.ಇ ಕಲಬುರಗಿರವರು work from home ಅಡಿಯಲ್ಲಿ ಬ್ಲಾಗ್ ರಚಿಸುವ ಕಾರ್ಯ ನೀಡಿದರು", ಇದರಿಂದಾಗಿ ಈ ‌ದಿನ‌  ಈ‌ ಒಂದು ಬ್ಲಾಗ್ ರಚನೆಯಾಯಿತು.  ಈ‌  ಬ್ಲಾಗ್ ನಿಮಗೆ‌ ಅವಶ್ಯವಿರು‌ವ‌ ಮಾಹಿತಿಯನ್ನು ಆ ತತ್ ಕ್ಷಣದಲ್ಲಿ  ಮಾಹಿತಿಯನ್ನು ಒದಗಿಸಿದರೆ ನನ್ನ ಶ್ರಮ‌ ಸಾರ್ಥಕ...
 ಈ ಬ್ಲಾಗ್ನಲ್ಲಿ  ಮಾಹಿತಿಗಳನ್ನು ಪ್ರತಿ ದಿನ update ಮಾಡಲಾಗುತ್ತದೆ.ಇದರ ಸದುಪಯೋಗ ಎಲ್ಲಾ‌ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ‌ ಸಿಗುವಂತಾಗಲು ತಾವು‌ ಇದರ ಬಗ್ಗೆ ಮಾಹಿತಿಯನ್ನು ‌ನಿಮ್ಮ‌ ನಿಮ್ಮ WhatsApp group ಗಳಲ್ಲಿ‌ share ಮಾಡಿ‌ ಪ್ರೋತ್ಸಾಹಿಸಿ ಗುರುವೃಂದದವರೆ..

ಪ್ರತಿದಿನ ಈ ಬ್ಲಾಗ್ ವೀಕ್ಷಿಸಿ...‌ಪ್ರೋತ್ಸಾಹಿಸಿ....

ನಿಮ್ಮ ಸಲಹೆಗಳಿಗೆ ಹಾಗೂ ಮಾಹಿತಿಗೆ ಸದಾ‌ ಸ್ವಾಗತವಿದೆ.


                ಧನ್ಯವಾದಗಳೊಂದಿಗೆ
   
              with regards....

                MAHAMAD BHASHA K

No comments:

Post a Comment

APP DOWNLOAD HERE

www.nammasarakarishaale.com