2022-23 ನೇ ಸಾಲಿಗೆ ಶಿಕ್ಷಕರ ಕಲ್ಯಾಣ ನಿಧಿಯ ಧನಸಹಾಯ ಮತ್ತು
ವಿದ್ಯಾರ್ಥಿ ವೇತನಕ್ಕಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಿಸಿರುವ
ಬಗ್ಗೆ |
ಕರ್ನಾಟಕ
ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯಲ್ಲಿ ಆಜೀವ ಸದಸ್ಯತ್ವ ನೊಂದಣಿ ಪಡೆಯದೇ ಇರುವ ಶಿಕ್ಷಕರು ಆಜೀವ
ಸದಸ್ಯತ್ವ ನೋಂದಣಿಯನ್ನು ಪಡೆಯುವ ಕುರಿತು |
2022-23
ನೇ ಸಾಲಿಗೆ ಶಿಕ್ಷಕರ ಮಕ್ಕಳಿಗೆ ಪ್ರತಿಭಾವಂತ ವಿದ್ಯಾರ್ಥಿ ವೇತನ ಮಂಜೂರು ಮಾಡಲು ಆನ್ಲೈನ್
ಮೂಲಕ ಅರ್ಜಿಗಳನ್ನು ಆಹ್ವಾನಿಸುವ ಬಗ್ಗೆ |
ಶಿಕ್ಷಕರ
ಕಲ್ಯಾಣ ನಿಧಿ ವಿದ್ಯಾರ್ಥಿ ವೇತನಕ್ಕಾಗಿ Online
ಅರ್ಜಿ ನಮೂನೆ |
ಶಿಕ್ಷಕರ
ಮಕ್ಕಳ ಉನ್ನತ ವ್ಯಾಸಂಗ ಧನ ಸಹಾಯಕ್ಕಾಗಿ ಅರ್ಜಿ ಸಲ್ಲಿಸಲು ಬೇಕಾಗುವ ಮಾಹಿತಿಗಳ ವಿವರ |
ಹೊಸ ಅಜೀವ ಸದಸ್ಯತ್ವ ಗುರುತಿನ ಕಾಡುಗಳನ್ನು Online ಮೂಲಕ ವಿತರಿಸುವ ಬಗ್ಗೆ ಮತ್ತು ಈಗಾಗಲೇ ಆಜೀವ ಸದಸ್ಯತ್ವ ನೋಂದಣಿ ಸಂಖ್ಯೆ ಪಡೆದು ಭೌತಿಕ ಕಾರ್ಡ್ ಹೊಂದಿರುವ ಶಿಕ್ಷಕರೂ ಸಹ ಕಡ್ಡಾಯವಾಗಿ ತಮ್ಮ ವಿವರಗಳನ್ನು ಸಂಬಂಧಿಸಿದ online portalನಲ್ಲಿ ನಮೂದಿಸುವ ಕುರಿತು ಹಾಗೂ Flow chart |
ಶಿಕ್ಷಕರ
ಕಲ್ಯಾಣ ನಿಧಿ ಹಾಗೂ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿಯಿಂದ ದೊರಕುವ ವಿವಿಧ ಸೌಲಭ್ಯಗಳ
ಮಾಹಿತಿ ಪುಸ್ತಕ |
1) ಶಿಕ್ಷಕರಿಗೆ ಹಾಗೂ ಅವರ ಅವಲಂಬಿತರಿಗೆ ವೈದ್ಯಕೀಯ ಧನ ಸಹಾಯ :
ಶಿಕ್ಷಕರಿಗೆ / ನಿವೃತ್ತ ಶಿಕ್ಷಕರಿಗೆ ಹಾಗೂ ಅವರ ಅವಲಂಬಿತರಿಗೆ ಖಾಯಿಲೆಯ ತೀವ್ರತೆಯನ್ನು ಆಧರಿಸಿ ಗರಿಷ್ಠ ರೂ. 50,000/- ಗಳ ಮಿತಿಗೊಳಪಟ್ಟು ವೈದ್ಯಕೀಯ ಧನ ಸಹಾಯವನ್ನು ನೀಡಲಾಗುತ್ತಿದೆ
2) ಸೇವೆಯಲ್ಲಿರುವಾಗ ಹಾಗೂ ನಿವೃತ್ತಿಯ ನಂತರ ಮೃತ ಹೊಂದಿದ ಶಿಕ್ಷಕರ ಕುಟುಂಬಗಳಿಗೆ ಕುಟುಂಬ ನಿರ್ವಹಣೆಗಾಗಿ ಧನ ಸಹಾಯ :
ಸರ್ಕಾರಿ ಮತ್ತು ಅನುದಾನಿತ ಶಾಲಾ ಶಿಕ್ಷಕರು ಸೇವೆಯಲ್ಲಿರುವಾಗಲೇ / ನಿವೃತ್ತಿಯ ನಂತರ ಮೃತಪಟ್ಟಲ್ಲಿ ಅವರ ವಾರಸುದಾರರಿಗೆ ಕುಟುಂಬ ಪಿಂಚಣಿ ಮಂಜೂರಾತಿಗೆ ಮುನ್ನ ತುರ್ತು ಕುಟುಂಬ ನಿರ್ವಹಣೆಗಾಗಿ ಸೇವೆಯಲ್ಲಿರುವಾಗ ಮೃತಪಟ್ಟಲ್ಲಿ ರೂ. 10,000/-ಗಳ ಧನಸಹಾಯ, ನಿವೃತ್ತಿಯ ನಂತರ ಮೃತಪಟ್ಟಲ್ಲಿ ರೂ.5,000/-ಗಳ ಧನಸಹಾಯವನ್ನು ನೀಡಲಾಗುವುದು.
3) ಶಿಕ್ಷಕರ ಮಕ್ಕಳ ಉನ್ನತ ವ್ಯಾಸಂಗಕ್ಕೆ ಧನ ಸಹಾಯ:
ಶಿಕ್ಷಕರಿಗೆ ಹಾಗೂ ನಿವೃತ್ತ ಶಿಕ್ಷಕರಿಗೆ ಪಿ.ಯು.ಸಿ ಯಿಂದ ಪದವಿ ತರಗತಿಗಳಲ್ಲಿ (ಡಿಪ್ಲೊಮಾ ಸೇರಿದಂತೆ) ವ್ಯಾಸಂಗ ಮಾಡುತ್ತಿರುವ ಅವರ ಮಕ್ಕಳ ವ್ಯಾಸಂಗಕ್ಕಾಗಿ ಕೋರ್ಸುಗಳನ್ನು ಆಧರಿಸಿ ಕನಿಷ್ಠ ರೂ. 1,000/- ರಿಂದ ಗರಿಷ್ಠ ರೂ. 3,000/-ಗಳ ಧನಸಹಾಯವನ್ನು ನೀಡಲಾಗುತ್ತಿದೆ.
4)ಶಿಕ್ಷಕರ / ನಿವೃತ್ತ ಶಿಕ್ಷಕರ ಮಕ್ಕಳಿಗೆ ಪ್ರತಿಭಾ ವಿದ್ಯಾರ್ಥಿ ವೇತನ:
ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಪದವಿ ಹಾಗೂ ಸ್ನಾತಕೋತ್ತರ ಪರೀಕ್ಷೆಗಳಲ್ಲಿ ಅತೀ ಹೆಚ್ಚು ಅಂಕ ಗಳಿಸಿದಂತಹ ಶಿಕ್ಷಕರ ಮಕ್ಕಳಿಗೆ ಪ್ರತಿಭಾ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ.
5) ಗುರುಭವನಗಳ ಹಾಗೂ ಅತಿಥಿ ಗೃಹಗಳ ನಿರ್ಮಣಕ್ಕೆ ಅನುದಾನ:
ಶಿಕ್ಷಕರ ಸಭೆ, ಸಮಾರಂಭ ಮತ್ತು ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸಲು ತಾಲ್ಲೂಕು/ಜಿಲ್ಲಾ ಕೇಂದ್ರಗಳಲ್ಲಿ ನಿರ್ಮಿಸುವ ಗುರುಭವನಕ್ಕೆ ಸಭಾಂಗಣದ ವಿಸ್ತೀರ್ಣವನ್ನಾಧರಿಸಿ ಕನಿಷ್ಠ ರೂ.12 ಲಕ್ಷದಿಂದ ಗರಿಷ್ಠ 30 ಲಕ್ಷ ರೂಗಳ ವರೆವಿಗೂ ಅನುದಾನವನ್ನು ಹಾಗೂ ಅತಿಥಿಗೃಹಗಳ ನಿರ್ಮಾಣಕ್ಕೆ (ತಲಾ ಕೊಠಡಿಗೆ ರೂ.1,10,000/-ರಂತೆ) ಗರಿಷ್ಠ 11 ಲಕ್ಷ ರೂಗಳ ಅನುದಾನವನ್ನು ನೀಡಲಾಗುತ್ತದೆ.
6) ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯಿಂದ ಶಿಕ್ಷಕರಿಗೆ ನೀಡುವ ವಿವಿಧ ಪ್ರಶಸ್ತಿಗಳು:
ಶ್ಲಾಘನೀಯ ಸೇವೆ ಸಲ್ಲಿಸಿದ ಪ್ರಾಥಮಿಕ/ಪ್ರೌಢಶಾಲಾ ಶಿಕ್ಷಕರನ್ನು ಗುರುತಿಸಿ ಜಿಲ್ಲಾ / ರಾಜ್ಯ ಮಟ್ಟದ ವಿಶೇಷ ಶಿಕ್ಷಕ / ಉತ್ತಮ ವಿಜ್ಞಾನ ಶಿಕ್ಷಕ ಪ್ರಶಸ್ತಿಗಳನ್ನು ನೀಡಲಾಗುವುದು.
7) ತಾಲ್ಲೂಕು, ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ಸಹಪಠ್ಯ ಚಟುವಟಿಕೆಗಳ ಸ್ಪರ್ಧೆಗಳಲ್ಲಿ ವಿಜೇತರಾದ ಶಿಕ್ಷಕರಿಗೆ ಪ್ರಶಸ್ತಿ :
ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ ತಾಲ್ಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಸಹಪಠ್ಯ ಚಟುವಟಿಕೆಗಳ ಸ್ಪರ್ಧೆಗಳ ಆಯೋಜನೆ ಮಾಡಲಾಗುತ್ತದೆ. ರಾಜ್ಯ ಮಟ್ಟದಲ್ಲಿ ಮೊದಲ ಮೂರು ಪ್ರಶಸ್ತಿ ಪಡೆದ ಶಿಕ್ಷಕರಿಗೆ ತಲಾ ರೂ. 5,000/- ರೂ. 3,000/- ಹಾಗೂ ರೂ. 2,000/- ಗಳ ನಗದು ಪ್ರಶಸ್ತಿ ನೀಡಲಾಗುತ್ತದೆ. ರಾಜ್ಯ ಮಟ್ಟದಲ್ಲಿ ಕಲಿಕಾ ವಸ್ತುಗಳ ತಯಾರಿಕೆ ಸ್ಪರ್ಧೆಯಲ್ಲಿ ಭಾಗವಹಿಸಿದ ಶಿಕ್ಷಕರಿಗೆ ತಯಾರಿಕಾ ವೆಚ್ಚವಾಗಿ ರೂ. 500/-ರ ಮೊತ್ತವನ್ನು ಹೆಚ್ಚುವರಿಯಾಗಿ ನೀಡಲಾಗುತ್ತದೆ
8) ಶಿಕ್ಷಕರಿಗೆ ಸುರಕ್ಷಾ ಪರಿಹಾರ ಯೋಜನೆ:
ಅಪಘಾತಗಳಿಂದಾಗಿ ಮೃತ ಹೊಂದಿದ ಸರ್ಕಾರಿ ಹಾಗೂ ಅನುಮೋದಿತ ಅನುದಾನಿತ ಶಾಲಾ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರಾಥಮಿಕ ಶಾಲಾ ಹಂತದಿಂದ ವಿಶ್ವವಿದ್ಯಾಲಯದ ಹಂತದವರೆಗಿನ ಶಿಕ್ಷಕರುಗಳಿಗೆ ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ವತಿಯಿಂದ ಸುರಕ್ಷಾ ಪರಿಹಾರ ಯೋಜನೆ” ಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯಡಿ ಶಿಕ್ಷಕರ ಕುಟುಂಬದವರಿಗೆ ರೂ. 50,000/- ವರೆಗೆ ಪರಿಹಾರ ಧನ ನೀಡಲಾಗುತ್ತಿದೆ
9) ಲ್ಯಾಪ್ ಟಾಪ್ ಖರೀದಿಗಾಗಿ ಬಡ್ಡಿ ರಹಿತ ಸಾಲ:
ಲ್ಯಾಪ್ ಟಾಪ್ ಖರೀದಿಗಾಗಿ ಪ್ರತಿ ತಾಲ್ಲೂಕಿನ 10 ಶಿಕ್ಷಕರುಗಳಿಗೆ ತಲಾ ರೂ. 30,000/- ಗಳ ಬಡ್ಡಿ ರಹಿತ ಸಾಲ ನೀಡಿ, ಮುಂದಿನ 10 ತಿಂಗಳಲ್ಲಿ ತಿಂಗಳಿಗೆ ರೂ. 3,000/- ದಂತೆ ಸಂಬಳದಲ್ಲಿ ಕಟಾಯಿಸಿ ಬಡ್ಡಿರಹಿತವಾಗಿ ಹಿಂಪಡೆಯಲಾಗುವುದು
ರಾಷ್ಟ್ರೀಯ ಶಿಕ್ಷಕರ ಕಲ್ಯಾಣ ಪ್ರತಿಷ್ಠಾನ, ನವದೆಹಲಿಯಿಂದ ಶಿಕ್ಷಕರಿಗೆ ನೀಡಲಾಗುತ್ತಿರುವ ಸೌಲಭ್ಯಗಳು
1) ಶಿಕ್ಷಕರಿಗೆ ಹಾಗೂ ಅವರ ಅವಲಂಬಿತರಿಗೆ ವೈದ್ಯಕೀಯ ಚಿಕಿತ್ಸೆಗೆ ಧನಸಹಾಯ :
ಶಿಕ್ಷಕರಿಗೆ / ನಿವೃತ್ತ ಶಿಕ್ಷಕರಿಗೆ ಹಾಗೂ ಅವರ ಅವಲಂಬಿತರಿಗೆ ಮಾರಕ ರೋಗಗಳ ಚಿಕಿತ್ಸೆಗಾಗಿ ವೈದ್ಯಕೀಯ ಧನಸಹಾಯವನ್ನು ನೀಡಲಾಗುತ್ತದೆ.
2) ಶಿಕ್ಷಕರ ಮಕ್ಕಳ ಉನ್ನತ ವ್ಯಾಸಂಗಕ್ಕೆ ಧನಸಹಾಯ :
ರಾಜ್ಯಮಟ್ಟದಲ್ಲಿ ವೈಜ್ಞಾನಿಕ ಹಾಗೂ ವಿನೂತನ ಶೈಕ್ಷಣಿಕ ಪ್ರಯೋಗಗಳನ್ನು ಮಾಡಿದ ಎಂಟು ಜನ (ಪ್ರಾಥಮಿಕ-4 ಮತ್ತು ಪ್ರೌಢ-4) ಶಿಕ್ಷಕರಿಗೆ ತಲಾ ರೂ.12,000/-ಗಳ ನಗದು ಬಹುಮಾನ ಒಳಗೊಂಡಂತೆ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ. ಪ್ರತಿ ವರ್ಷ ಅರ್ಹ ಶಿಕ್ಷಕರಿಂದ ಈ ಪ್ರಶಸ್ತಿಗೆ ಕ್ಷೇತ್ರಶಿಕ್ಷಣಾಧಿಕಾರಿಗಳ ಮೂಲಕ ಅರ್ಜಿಗಳನ್ನು ಪಡೆಯಲಾಗುತ್ತದೆ.
3)ಗುರುಭವನಗಳ ನಿರ್ಮಾಣಕ್ಕೆ ಅನುದಾನ :
ಐತಿಹಾಸಿಕ ಜಿಲ್ಲಾ ಕೇಂದ್ರಗಳಲ್ಲಿ ಗುರುಭವನ ನಿರ್ಮಾಣಕ್ಕೆ ಸೂಕ್ತ ದಾಖಲೆಗಳೊಂದಿಗೆ ಪ್ರಸ್ತಾವನೆ ಸಲ್ಲಿಸಿದಲ್ಲಿ ರಾ.ಶಿ.ಕ.ಪ್ರ.ನವದೆಹಲಿಯ ವತಿಯಿಂದ ರೂ.20 ಲಕ್ಷಗಳವರೆಗೆ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲಾಗುತ್ತದೆ.
ವಿದ್ಯಾರ್ಥಿಗಳಿಗೆ ನೀಡುವ ಸೌಲಭ್ಯಗಳು :
1) ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಪರೀಕ್ಷೆಗಳಲ್ಲಿ ಶೇ.100 ರಷ್ಟು ಫಲಿತಾಂಶ ಪಡೆದ ಶಾಲೆ/ ಪದವಿ ಪೂರ್ವ ಕಾಲೇಜುಗಳಿಗೆ ಪ್ರೋತ್ಸಾಹಧನ :
ಎಸ್.ಎಸ್.ಎಲ್.ಸಿ/ಪಿ.ಯು.ಸಿ ಪರೀಕ್ಷೆಯಲ್ಲಿ ಶೇ.100 ರಷ್ಟು ಫಲಿತಾಂಶ ಪಡೆದ 30 ಕ್ಕಿಂತ ಹೆಚ್ಚು ಮಕ್ಕಳು ಅಭ್ಯಾಸ ಮಾಡುತ್ತಿರುವಂತಹ ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳಿಗೆ ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ರೂ. 10,000/-ಗಳ ಪ್ರೋತ್ಸಾಹಧನ ನೀಡಲಾಗುತ್ತಿದೆ. ಅನುದಾನ ರಹಿತ ಶಾಲಾ ಕಾಲೇಜುಗಳಿಗೆ ಅಭಿನಂದನಾ ಫಲಕ ನೀಡಿ ಜಿಲ್ಲಾ ಮಟ್ಟದಲ್ಲಿ ಗೌರವಿಸಲಾಗುತ್ತಿದೆ.
2) ಎನ್.ಟಿ.ಎಸ್.ಇ ವಿದ್ಯಾರ್ಥಿ ವೇತನ :
ರಾಜ್ಯಮಟ್ಟದ ಪ್ರತಿಭಾನ್ವೇಷಣೆ ಪರೀಕ್ಷೆಯಲ್ಲಿ (ಎನ್.ಟಿ.ಎಸ್.ಇ) ಉತ್ತೀರ್ಣರಾಗಿ ರಾಷ್ಟ್ರ ಮಟ್ಟದಲ್ಲಿ ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿಯ ವತಿಯಿಂದ ವಾರ್ಷಿಕ ರೂ.2,000/- ರಂತೆ ಎರಡು ವರ್ಷಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತದೆ.
3) ಅರ್ಹ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕ/ಪರೀಕ್ಷಾ ಶುಲ್ಕ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ:
ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿಗೆ ಪ್ರೌಢಶಾಲೆ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ವಂತಿಗೆಯ ಶೇ.50 ಭಾಗವನ್ನು ಮತ್ತು ಪದವಿ ಪೂರ್ವ ಕಾಲೇಜು(ಪಿಯುಸಿ), ಪ್ರಥಮ ದರ್ಜೆ ಹಾಗೂ ಇನ್ನಿತರೆ ಕಾಲೇಜುಗಳಿಂದ ಸಂಗ್ರಹಿಸಿದ ವಂತಿಗೆಯ ಶೇ.60 ಭಾಗವನ್ನು ಆಯಾ ಶಾಲಾ ಕಾಲೇಜುಗಳಲ್ಲಿ ಉಳಿಸಿಕೊಂಡು ವಿದ್ಯಾರ್ಥಿಗಳ ವಿದ್ಯಾಭಿವೃದ್ಧಿ ಕಾರ್ಯಕ್ರಮಗಳಿಗೆ ಉಪಯೋಗಿಸಿಕೊಳ್ಳಲು ಸಂಬಂಧಿಸಿದ ಶಾಲಾ / ಕಾಲೇಜುಗಳಿಗೆ ಅನುಮತಿ ನೀಡಲಾಗಿದೆ.
4) ಶೌರ್ಯ ಪ್ರಶಸ್ತಿ :
ಅಪಾಯ ಸನ್ನಿವೇಶಗಳಲ್ಲಿ ಅಸಾಧಾರಣ ಧೈರ್ಯ, ಸಮಯ ಪ್ರಜ್ಞೆ ಮತ್ತು ಸಾಹಸ ಪ್ರದರ್ಶಿಸಿ ಕರ್ನಾಟಕ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ರಾಜ್ಯ ಶೌರ್ಯ ಪ್ರಶಸ್ತಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ನಿಧಿಯ ವತಿಯಿಂದ ರೂ. 2,500/- ಗಳ ನಗದು ಪುರಸ್ಕಾರ ನೀಡಲಾಗುವುದು.
5) ಕ್ರೀಡಾ ಪ್ರಶಸ್ತಿ :
ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಆಯೋಜಿಸಲಾಗುವ ಶಾಲಾ ಕ್ರೀಡೆಗಳಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಮೂರು ಪ್ರಶಸ್ತಿಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಕ್ರಮವಾಗಿ ರೂ. 3,000/-, ರೂ. 2,500/- ಹಾಗೂ ರೂ.2,000/- ಗಳನ್ನು ವೈಯಕ್ತಿಕ ಬಹುಮಾನವಾಗಿ ಹಾಗೂ ಪ್ರಥಮ ಮೂರು ಪ್ರಶಸ್ತಿಗಳನ್ನು ಗೆದ್ದ ತಂಡಗಳಿಗೆ ಕ್ರಮವಾಗಿ ರೂ.2,000/-, ರೂ.1,500/- ಹಾಗೂ ರೂ.1,000/- ಗಳನ್ನು ನೀಡುವ ಮೂಲಕ ಪ್ರೋತ್ಸಾಹಿಸಲಾಗುತ್ತಿದೆ.
6) ವಿದ್ಯಾರ್ಥಿಗಳಿಗೆ “ಸುರಕ್ಷಾ ಪರಿಹಾರ ಯೋಜನೆ’’:
ಅಪಘಾತಗಳಿಂದ ಮೃತ ಹೊಂದಿದ ಪ್ರಾಥಮಿಕ ಶಾಲಾ ಹಂತದಿಂದ ವಿಶ್ವವಿದ್ಯಾಲಯದ ಹಂತದವರೆಗೆ ವ್ಯಾಸಂಗ ಮಾಡುತ್ತಿರುವ ರೆಗ್ಯೂಲರ್ ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿ ವತಿಯಿಂದ “ವಿದ್ಯಾರ್ಥಿ ಸುರಕ್ಷಾ ಪರಿಹಾರ ಯೋಜನೆ” ಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯಡಿ ವಿದ್ಯಾರ್ಥಿಯ ಪೋಷಕರಿಗೆ ರೂ. 50,000/- ಪರಿಹಾರ ಧನ ನೀಡಲಾಗುತ್ತಿದೆ.
7) ವಿದ್ಯಾರ್ಥಿಗಳಿಗೆ ವೈದ್ಯಕೀಯ ಧನಸಹಾಯ :
ಪ್ರಾಥಮಿಕ ಶಾಲಾ ಹಂತದಿಂದ ವಿಶ್ವವಿದ್ಯಾಲಯದ ಹಂತದವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಖಾಯಿಲೆಯ ತೀವ್ರತೆಯನ್ನು ಆಧರಿಸಿ ಗರಿಷ್ಠ ರೂ. 50,000/-ಗಳ ಮಿತಿಗೊಳಪಟ್ಟು ವೈದ್ಯಕೀಯ ಧನಸಹಾಯವನ್ನು ನೀಡಲಾಗುತ್ತಿದೆ.
ಎ) ಜಿಲ್ಲಾ ಮಟ್ಟದಲ್ಲಿ ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ :
ಜಿಲ್ಲಾ ಮಟ್ಟದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಕೆಳಕಂಡಂತೆ ನಗದು ಪ್ರಶಸ್ತಿ ನೀಡಿ ಪ್ರೋತ್ಸಾಹಿಸಲಾಗುತ್ತಿದೆ.
ಎಸ್.ಎಸ್.ಎಲ್.ಸಿ-ಪ್ರತಿ ಜಿಲ್ಲೆಗೆ ರೂ. 2,000/- ದಂತೆ -10 ಪ್ರಶಸ್ತಿ
ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ - 05 ಪ್ರಶಸ್ತಿ
ಇತರೆ ಮಾಧ್ಯಮ ವಿದ್ಯಾರ್ಥಿಗಳಿಗೆ - 05 ಪ್ರಶಸ್ತಿ
ಪಿಯುಸಿ - ಪ್ರತಿ ಜಿಲ್ಲೆಗೆ ರೂ.3,000/- ದಂತೆ - 06 ಪ್ರಶಸ್ತಿ
ವಿಜ್ಞಾನ ವಿಷಯದ ವಿದ್ಯಾರ್ಥಿಗಳಿಗೆ - 02 ಪ್ರಶಸ್ತಿ
ಕಲಾ ವಿಷಯದ ವಿದ್ಯಾರ್ಥಿಗಳಿಗೆ - 02 ಪ್ರಶಸ್ತಿ
ವಾಣಿಜ್ಯ ವಿಷಯದ ವಿದ್ಯಾರ್ಥಿಗಳಿಗೆ -02 ಪ್ರಶಸ್ತಿ
ಏ) ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಸಹ-ಪಠ್ಯ ಚಟುವಟಿಕೆಗಳು :
ರಾಜ್ಯದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದ ಸಾಂಸ್ಕೃತಿಕ ಸಹಪಠ್ಯ ಚಟುವಟಿಕೆಗಳ ಆಯೋಜನೆಗೆ ನಿಧಿಗಳಿಂದ ಅನುದಾನವನ್ನು ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಬಿಡುಗಡೆ ಮಾಡಲಾಗುತ್ತದೆ. ಚಟುವಟಿಕೆಗಳ ರೂಪುರೇಷೆ ಹಾಗೂ ಆಯೋಜನೆಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆಯೇ ಮಾಡುತ್ತದೆ.
How to download k2 challan for Punyakoti scheam
ReplyDelete